ಅಧಿಕಾರಿಯೊಬ್ಬರನೆ ಮುಂದೆ ಮಾಟ ಪ್ರಯೋಗ ಕೃತ್ಯ ಸಿ.ಸಿ.ಕ್ಯಾಮರದಲ್ಲಿ ಸೆರೆ.

by | 12/02/23 | ಸುದ್ದಿ

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.12.ಸರಕಾರಿ ಅಧಿಕಾರಿಯೊಬ್ಬರ ಮನೆ ಮುಂದೆ ಪದೇ ಪದೇ ಮಾಟ ಮಂತ್ರ ಮಾಡುತ್ತಿರುವುದರಿಂದ ಕುಟುಂಬಸ್ಥರಲ್ಲಿ ಭಯದ ಕರಿನೆತಳು ಆವರಿಸಿದೆ. ಹೌದು ಇದು ಚಳ್ಳಕೆರೆ ನಗರದ ವಿಠಲನಗರದಲ್ಲಿರುವ ಸರಕಾರಿ ಅಧಿಕಾರಿಯೊಬ್ಬರ ಮನೆಮುಂದೆ ಈಗಾಗಲೆ ಎರಡು ಬಾರಿ ಹರಿಸಿಣ.ಕುಂಕುಮ ಸೇರಿದಂತೆ ವಾಮಾಚಾರಕ್ಕೆ ಸಂಬಂಧಟ್ಟ ವಸ್ತುಗಳನ್ನು ಹಾಕಿ ಹೋಗಿದ್ದರು. ವಾಮಾಚರದಕ್ಕೆ ನಂಬಿಕೆ ಇರಲಿಲ್ಲ ಇದನ್ನೆ ನಿರ್ಲಕ್ಷವಸಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದಾರೆ. ಎಂದಿನಂತೆ ಮನೆಯವರೆಲ್ಲ ಮಲಗಿ ಭಾನುವಾರ ಬೆಳಗ್ಗೆ ಎದ್ದು ಬಾಗಿಲು ತೆಗೆದು ಹೊರ ಬಂದಾಗ ಮನೆ ಮುಂದೆ ಶನಿವಾರ ರಾತ್ರಿ ಎಣ್ಣೆ ಚೆಲ್ಲಿ ಮಾಟಪ್ರಯೋಗ ಮಾಡಿರುವುದು ಕಂಡು ಮನೆಯಲ್ಲಿನ ಮಹಿಳೆ ಹಾಗೂ ಮಕ್ಕಳು ಬೆಚ್ಚಿ ಬಿದ್ದು ಇದರ ಪರಿಹಾರಕ್ಕಾಗಿ ಜ್ಯೋತೀಷಿಗಳ ಮೊರೆ ಹೊಗ್ಗಿದ್ದಾರೆ.
ಯಾರು ನನಗೆ ವೈರಿಗಳು. ಏಕೆ ಈರೀತಿ ಮಾಡುತ್ತಾರೆ ಎಂದು ತಲೆಕೆಡಿಸಿಕೊಂಡು ಪಕ್ಕದ ಮನೆಯ ಸಿ.ಸಿ.ಕ್ಯಾಮರ ಪುಟೇಜ್ ಪರಿಶೀಲನೆ ಮಾಡಿದಾಗ ಯುವಕನೊಬ್ಬ ಬಂದು ಮನೆ ಮುಂದೆ ಸಿಂಪರಣೆ ಮಾಡುತ್ತಿರುವ ದೃಶ್ಯ ಸಿ.ಸಿ.ಕ್ಯಾಮರದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು ಇದರಿಂದ ಪದೇ ಪದೆ ಮಾಟ ಪ್ರಯೋಗ ಮಾಡಿತ್ತಿರು ವ್ಯಕ್ಕಿ ಇವರೇ ಎಂಬುದು ಅನುಮಾನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿ ಇದಕ್ಕೆ ಪ್ರತಿಕ್ರಿಯೆ ನೀಡಿ ನಾನು ಇಲ್ಲಿಗೆ ವರ್ಗಾವಣೆಯಾಗಿ ಬರುವ ಮುನ್ನ ಪ್ರಭಾರವಹಿಸಿಕೊಂಡಿದ್ದ ಅಧಿಕಾರಿಯ ಅವಧಿಯಲ್ಲಿ ಕಚೇರಿಯಲ್ಲಿ ಭ್ರಷ್ಟಾರ ನಡೆದಿರುವ ಬಗ್ಗೆ ಬಹಿರಂಗವಾದ ಹಿನ್ನೆಯಲ್ಲಿ ನನ್ನ ಹಾಗೂ ಕುಟುಂದ ಮೇಲೆ ಮಾಟ ಪ್ರಯೋಗ ಮಾಡಿದ್ದಾರೆ ಎಂಬ ಅನುಮಾನವಿದ್ದು ಕೃತ್ಯ ಮಾಡಿದ ಯುವಕ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದ್ದು ಪೋಲಿಸ್ ಠಾಣೆಗೆ ದೂರು ನೀಡಲಾಗುವುದು ತನಿಖೆಯ ನಂತರ ತಿಳಿಯಲ್ಲಿ ಕಿಂತಹ ಕೃತ್ಯ ಮಾಡುವವರಿ ಮೌಡ್ಯಾರಣೆ ನಿಶೇಷದ ಕಾಯ್ದೆಯಡಿಲ್ಲಿ ಕಾನೂನು ಕ್ರಮಜರುಗಿಸುವಂತೆ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *