ಚಳ್ಳಕೆರೆ ಫೆ13. ವಿದ್ಯಾರ್ಥಿಗಳಿಗಾಗಿ ಶಾಲಾ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯ ಕಾಮಗಾರು ಮೂರು ವರ್ಷಗಳು ಕಳೆದರೂ ಮುಗಿಯದ ಕಾರಣ ವಿದ್ಯಾರ್ಥಿಗಳು ಜಲ ಬಾದೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಆಂದ್ರಗಡಿಭಾಗಕ್ಕೆ ಹೊಂದಿಕೊಂಡ ಓಬಳಾಪುರ ಗ್ರಾಮಪಂಚಾಯಿತಿ ಕಚೇರಿಗೆ ಹೊಂದಿಕೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಿರುವ ಗ್ರಾಮಪಂಚಾಯತಿ ವತಿಯಿಂದ ನಿರ್ಮಿಸುತ್ತಿರುವ ಶೌಚಾಲಯ ಕಾಮಗಾರಿ ಮೂರು ವರ್ಷಗಳು ಪೂರ್ಣಗೊಳ್ಳದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲದೆ ಬಯಲು ಹಾಗೂ ಗಿಡಗೆಂಟೆಗಳ ಪೊದೆಯಲ್ಲಿ ಮೂತ್ರ ವಿಸರ್ಜೆನೆ ಮಾಡುವುದು ಅನಿವಾರ್ಯವಾಗಿದೆ.
ಓಬಳಾಪುರ ಗ್ರಾಮದ ಶತಮಾನ ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇತರಗತಿಯವರಿಗೆ ಇದ್ದು 110 ಬಾಲಕಿರು, 70 ಬಾಲಕರಿದ್ದು ಒಟ್ಟು 180 ವಿದ್ಯಾರ್ಥಿಗಳು ಕಲಿಯುವ ಶಾಲೆಯಲ್ಲಿ ಶೌಚಾಲಯ ನಿರ್ಮಿಸದೆ ಇರುವುದು ವಿಪರ್ಯಾಸವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ನೈರ್ಮಲ್ಯ , ಸ್ವಚ್ಚ ಭಾರತ ಎಂಭ ಯೋಜನೆ ಜಾರಿಗೆ ತಂದು ಬಯಲು ಶೌಚಾಮುಕ್ತ ಜಾರಿಗೊಳಿಸುವಂತೆ ಶಾಲಾ ಮಕ್ಕಳಿಂದ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಾರ್ವಜನಿಕರು ಅರಿವು ಮೂಡಿಸಲು ಜಾಥ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಾರೆ ಅರಿವು ಮೂಡಿಸುವ ಮಕ್ಕಳೇ ಶೌಚಾಲಯದಿಂದ ವಂಚಿತರಾಗಿದ್ದಾರೆ ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಸಾಕಷ್ಟು ಬಾರಿ ಗ್ರಾಪಂ ಕಚೇರಿಗೆ ಲಿಖಿತವಾಗಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಸರಕಾರಿ ಶಾಲೆಗಳು ಶೌಚಾಲಯ ವಂಚಿತರಾಗ ಬಾರದು ಎಂಬ ನಿಯಮವಿದೆ ಆದರೂ ಸಹ ಅತಿ ಹೆಚ್ಚು ಬಾಲಕಿಯೇ ಓದುವ ಸರಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡದೆ ಇರುವುದು ಇದು ಮಕ್ಕಳ ಹಕ್ಕು ಉಲ್ಲಂಘನೆಯಾಗಿರುವುದು ಕಂಡು ಬಂದಿದೆ ಈಗಲಾದರೂ ಸರಕಾರಿ ಶಾಲಾ ಆವರಣದಲ್ಲಿ ಅರೆ ಬರೆಯಾಗಿ ನಿರ್ಮಾಣವಾಗಿರುವ ಕಾಮಗಾರಿಯನ್ನು ಪೂರ್ಣಗೊಳಿಸುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments