ಅಡಿಕೆ ವ್ಯಾಪಾರಿಯಿಂದ ಹಣ ದರೋಡೆ ಮಾಡಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

by | 01/01/24 | ಕ್ರೈಂ

ಚಿತ್ರದುರ್ಗ ಜ.1. ಅಡಿಕೆ ವ್ಯಾಪಾರಿಯಿಂದ ಹಣ ದರೋಡೆ ಮಾಡಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಇದು ಚಿತ್ರದುರ್ಗ ತಾಲ್ಲೂಕು, ಹೊಸಹಳ್ಳಿ ಗ್ರಾಮದ ಮಹಮ್ಮದ್ ಇರ್ಫಾನುಲ್ಲಾ (28 ), ಅಡಿಕೆ ವ್ಯಾಪಾರ ಇವರು ನೀಡಿದ ದೂರಿನಲ್ಲಿ ತಾವು ತನ್ನ ಸ್ನೇಹಿತ
ಜಾಕೀರ್‌ನೊಂದಿಗೆ ದಿನಾಂಕ 03.12.2023 ರಂದು ಹೈದರಾಬಾದ್‌ಗೆ ಹೋಗಿ ಅಡಿಕೆ ವ್ಯಾಪಾರ ಮಾಡಿ
1,50,00,000/-ರೂ ಹಣ ಪಡೆದುಕೊಂಡು, ಹೈದರಾಬಾದ್‌ನಿಂದ ಬಸ್ಸಿನ ಮೂಲಕ ದಿನಾಂಕ 04.12.2023
ರಂದು ಬೆಳಗಿನ ಜಾವ ಚಿತ್ರದುರ್ಗಕ್ಕೆ ಬಂದು, ಅಲ್ಲಿಂದ ಹೊಸಹಳ್ಳಿಗೆ ಹೋಗಲು ತಾವು ರೈಲ್ವೆ ನಿಲ್ದಾಣದ
ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಹತ್ತಿ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ಈಚಲನಾಗೇನಹಳ್ಳಿ ರಸ್ತೆಯಲ್ಲಿ
ಖಾದಿಕೇಂದ್ರದ ಬಳಿ ಹೋಗುತ್ತಿರುವಾಗ ಯಾವುದೋ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿದ್ದು, ಪಿರಾದಿಯು ತನ್ನ
ದ್ವಿಚಕ್ರವಾಹನವನ್ನು ನಿಧಾನಗೊಳಿಸಿದಾಗ ಹಿ೦ದಿನಿ೦ದ ಎರಡು ಮೋಟಾರ್‌ ಸೈಕಲ್‌ನಲ್ಲಿ 4
ಅಪರಿಚಿತರು ಏಕಾಏಕಿ ಬಂದು ಮಹಮ್ಮದ್ ಇರ್ಪಾನುಲ್ಲಾ ಮತ್ತು ಆತನ ಸ್ನೇಹಿತನಿಗೆ ತಳ್ಳಿ ಬೈಕ್
ಸಮೇತ ಕೆಳಗೆ ಬೀಳಿಸಿ, ಕೈಕಾಲುಗಳಿಂದ ಹೊಡೆದು ಚಾಕು ತೋರಿಸಿ ಬೆದರಿಸಿ ತಮ್ಮ ಬಳಿಯಿದ್ದ ಎರಡು
ಹಣದ ಬ್ಯಾಗ್‌ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆ. ಹಣ ದರೋಡೆ ಮಾಡಿದವರ
ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆ ದೀರು ಸ್ವೀಕರಿದ ಗ್ರಾಮಾಂತರ ಠಾಣೆ ಪೋಲಿಸರು ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ದರೋಡೆಕೋರರನ್ನು ಬಂದಿಸಲು ತಂಡ ರಚಿಸಿ ದರೋಡೆ ಕೋರರನ್ನು ಪತ್ತೆ ಮಾಡಿ ಚಿತ್ರದುರ್ಗ ಅಂತರ್ ಜಿಲ್ಲಾ ದರೋಡೆಕೋರರ ಬಂಧಿಸಿ
63 ಲಕ್ಷದ 25 ಸಾವಿರ ರೂ ನಗದು ಹಣ ಹಾಗೂ ಹೊಸ ಕಾರು & ಬೈಕ್ ವಶಕ್ಕೆ ಪಡೆಯಲಾಗಿದೆ. ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ
ಪೊಲೀಸ್ ಠಾಣೆಯ
ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಉಪವಿಭಾಗದ ಉಪಾಧೀಕ್ಷಕರಾದ ಅನಿಲ್
ಕುಮಾರ್ & ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ .ಮುದ್ದರಾಜ.ವೈ
ಹಾಗೂ ಸಿಬ್ಬಂದಿಯವರು ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಹಾಗೂ
ಬಾತ್ಮಿದಾರರರು ನೀಡಿದ ಸುಳಿವಿನ ಮೇರೆಗೆ ಮಾಹಿತಿ ಸಂಗ್ರಹಿಸಿ ಸದರಿ ಪ್ರಕರಣದಲ್ಲಿ ಭಾಗಿಯಾದ
ಆರೋಪಿತರನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಲಾಗಿರುತ್ತದೆ.
ಶಶಿಕಿರಣ್ ಆರ್,(38 )ವರ್ಷ, ಹಾಲಿ ವಾಸ:-ಚರ್ಚ್ ಹತ್ತಿರ, ಕಾಳಿದಾಸ
ಸರ್ಕಲ್, ಬಿ. ಬ್ಲಾಕ್, ಜಯನಗರ, ದಾವಣಗೆರೆ ಟೌನ್,
ನವೀನ ಹೆಚ್, ( 19 ), ಹಾಲಿವಾಸ: ವಿಶಾಲ್ ಮೆಗಾ ಮಾರ್ಟ್ ಹತ್ತಿರ,
ಕೆಂಪೆಗೌಡ ಲೇಔಟ್, ಬೆಂಗಳೂರು ನಗರ.
ಮಂಜುನಾಥ ಆರ್., (23) ಹೆಚ್.ಬಸವಪುರ ಗ್ರಾಮ, ಮಾಯಕೊಂಡ
ಹೋಬಳಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ.
ಪ್ರತಾಪಗೌಡ ಜಿ.ಎಸ್. ( 23 ) ಹಿಂಡಸನಕಟ್ಟೆ ಗ್ರಾಮ, ಮಾಯಕೊಂಡ ಹೋಬಳಿ,
ದಾವಣಗೆರೆ ತಾಲ್ಲೂಕು
ಕಿರಣ್ ಎ. ( 21) ಚಿಕ್ಕಬೆನ್ನೂರು ಗ್ರಾಮ, ಸಂತೆಬೆನ್ನೂರು ಹೋಬಳಿ, ಚೆನ್ನಗಿರಿ
ತಾಲ್ಲೂಕು
. ಮಹಮದ್ ಷಫೀಉಲ್ಲ, (23), ಹೊಸಹಳ್ಳಿ ಗ್ರಾಮ,
ಚಿತ್ರದುರ್ಗ ತಾಲ್ಲೂಕು & ಜಿಲ್ಲೆ.
ಎಸ್. ಸಮೀರ್ ಭಾಷಾ ಬಿ( 24 )ಹೊಸಹಳ್ಳಿ ಗ್ರಾಮ, ಚಿತ್ರದುರ್ಗ
ತಾಲ್ಲೂಕು & ಜಿಲ್ಲೆ ಇವರನ್ನು ದಸ್ತಗಿರಿ ಮಾಡಿರುತ್ತಾರೆ.
ಬಿ.ಕೆ. ಲಿಂಗರಾಜ ಯಾನ ಪೂಜಾರಿ ( 42 ), ತಣಿಗೆರೆ ತಾಲ್ಲೂಕು,
ಸಂತೆಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕು. ದಾವಣಗೆರೆ ಜಿಲ್ಲೆ.
. ಹುಸೇನ್ ಭಾಷ (19) , ಹಾಲಿ ವಾಸ:- ರಾಯಲ್ ರಘು ಬಿಲ್ಡಿಂಗ್, ಅಂಬಿ
ಸರ್ಕಲ್ ಹತ್ತಿರ, 2ನೇ ಕ್ರಾಸ್, ರಾಜಗೋಪಾಲನಗರ, ಲಗ್ಗೆರೆ, ಬೆಂಗಳೂರು ನಗರ. ಶ್ರೀನಿವಾಸ ಬಿ. @ ಆಚಾರಿ ಸೀನ (, 34) , ಹಾಲಿ ವಾಸ:-ಮಹೇಶ್
ಬಾರ್ಗವ ಬಿಲ್ಡಿಂಗ್, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮುಂಭಾಗ, 8ನೇ ಮೈಲು, ದೊಡ್ಡಬಿದರಕಲ್ಲು,
ಪೀಣ್ಯ, ಬೆಂಗಳೂರು ಟೌನ್ ,ಒಟ್ಟು ಹತ್ತುಜನ ದರೋಡೆಕೋರರನ್ಬು ದಸ್ತಗಿರಿ ಮಾಡಿರುತ್ತಾರೆ.
ಸದರಿ ಆರೋಪಿತರ ವಿಚಾರಣೆ ಸಮಯದಲ್ಲಿ ಮಹಮದ್ ಷಫೀಉಲ್ಲಾ @ ಸೈಡಿ ಮತ್ತು
ಸಮೀರ್ ಭಾಷಾ ಎಂಬುವವರು ಪಿದ್ಯಾದಿಯ ಗ್ರಾಮದವರೇ ಆಗಿದ್ದು, ಇವರಿಗೆ ಪಿತ್ಯಾದಿ ಹೈದರಾಬಾದ್
ನಿಂದ ಅಡಿಕೆ ಮಾರಿ ಹಣ ತರುವ ಬಗ್ಗೆ ಮಾಹಿತಿ ಇದ್ದು, ಈ ಮಾಹಿತಿಯನ್ನು ತನ್ನ ಸ್ನೇಹಿತರಾದ
ಶಶಿಕಿರಣ @ ಅಪ್ಪಿ ಹಾಗೂ ಶ್ರೀನಿವಾಸ ಎಂಬುವವರಿಗೆ ತಿಳಿಸಿದ್ದು, ಇರ್ಫಾನುಲ್ಲಾ ಮತ್ತು ಜಾಕೀರ್
ಇವರು ಹೈದರಾಬಾದ್ ನಿಂದ ಹಣದೊಂದಿಗೆ ಚಿತ್ರದುರ್ಗಕ್ಕೆ ಬಂದು ಹೊಸಹಳ್ಳಿ ಗ್ರಾಮಕ್ಕೆ ಹೋಗುವಾಗ
ಸದರಿ ಹಣವನ್ನು ದರೋಡೆ ಮಾಡಿ ಎಲ್ಲರೂ ಹಂಚಿಕೊಳ್ಳೋಣ ಎಂಬುದಾಗಿ ತೀರ್ಮಾನಿಸಿದ್ದು, ಈ
ಕೆಲಸಕ್ಕಾಗಿ ಶಶಿಕಿರಣನು ತನ್ನ ಉಳಿದ ಸ್ನೇಹಿತರಾದ ಲಿಂಗರಾಜು, ಮಂಜುನಾಥ, ಪ್ರತಾಪ್‌ ಗೌಡ, ಕಿರಣ
ಎಂಬುವವರನ್ನು ಹಾಗೂ ಶ್ರೀನಿವಾಸ್ @ ಆಚಾರಿ ಸೀನ ಎಂಬುವನು ತನ್ನ ಸ್ನೇಹಿತರಾದ ನವೀನ್, ಭಾಷ,
ಚಿನ್ನು ಎಂಬುವರನ್ನು ಬಸ್ಸು, ಕಾರು & ದ್ವಿಚಕ್ರವಾಹನಗಳ ಸಹಾಯದಿ೦ದ ಕರೆಯಿಸಿಕೊಂಡು
ದಿನಾಂಕ:03.12.2023 ರಂದು ರಾತ್ರಿ ಚಿತ್ರದುರ್ಗ ರೈಲ್ವೆ ಣದ ಕ್ರಾಸ್ ಹತ್ತಿರ, ಬಿಡಿ.ರಸ್ತೆಯಲ್ಲಿ ಎಲ್ಲರೂ
ಸೇರಿ ಹಣ ದರೋಡೆ ಮಾಡುವ ಬಗ್ಗೆ ಸಂಚು ರೂಪಿಸಿ, ದರೋಡೆ ಮಾಡಿದ ಹಣವನ್ನು ಎಲ್ಲರೂ
ಹಂಚಿಕೊಳ್ಳೋಣ
ಎಂಬುದಾಗಿ ತೀರ್ಮಾನಿಸಿ, ಅದರಂತೆ ಪಿರಾದಿ ಮತ್ತು ಆತನ ಸ್ನೇಹಿತ
ದಿನಾಂಕ:04.12.2023 ರಂದು ಬೆಳಗ್ಗೆ ಹೈದರಾಬಾದ್ ನಿಂದ ಬಸ್ಸಿನಲ್ಲಿ ಬಂದು ತಾವು ತಂದಿದ್ದ 1.5 ಕೋಟಿ
ರೂ ಹಣದೊಂದಿಗೆ ಬಸ್ಸಿನಿಂದ ಇಳಿದಿದ್ದನ್ನು ಆರೋಪಿತರಾದ ಷಫಿವುಲ್ಲಾ & ಸಮೀರರವರು ನೋಡಿ
ಮಾಹಿತಿಯನ್ನು ಆರೋಪಿತರಾದ ಶಶಿಕಿರಣನಿಗೆ ತಿಳಿಸಿರುತ್ತಾರೆ. ಪಿರಾದಿ & ಆತನ
ಸ್ನೇಹಿತ
ದ್ವಿಚಕ್ರವಾಹನದಲ್ಲಿ ಹೊಸಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಆರೋಪಿ ಶಶಿಕಿರಣ, ಶ್ರೀನಿವಾಸ್, ಕಿರಣ್ &
ಪ್ರತಾಪ್ ಗೌಡ
ಇವರು ತಮ್ಮ ದ್ವಿಚಕ್ರವಾಹನಗಳಲ್ಲಿ ಹಿಂಬಾಲಿಸಿ ಪಿರಾದಿಯು ಈಚಲನಾಗೇನಹಳ್ಳಿ
ರಸ್ತೆಯಲ್ಲಿ ಖಾದಿ ಗ್ರಾಮೋದ್ಯೋಗ ಕಛೇರಿ ಬಳಿ ಹೋಗುತ್ತಿರುವಾಗ ಮೊದಲೇ ತೀರ್ಮಾನಿಸಿದಂತೆ
ಆರೋಪಿ ಮಂಜುನಾಥನು ಪಿರಾದಿ ಸಂಚರಿಸುವ ರಸ್ತೆಗೆ ಅಡ್ಡವಾಗಿ ಕಾರನ್ನು ನಿಲ್ಲಿಸಿದ್ದು ಪಿಯ್ಯಾದಿ ತನ್ನ
ದ್ವಿಚಕ್ರವಾಹನವನ್ನು ನಿಧಾನಗೊಳಿಸುತ್ತಿದ್ದಂತೆ ಹಿಂಬಾಲಿಸುತ್ತಿದ್ದ ಶಶಿಕಿರಣ ಮತ್ತು ಇತರೆ ಆರೋಪಿತರು
ಪಿರಾದಿ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಚಾಕು ತೋರಿಸಿ, ಬೆದರಿಸಿ ಪಿದ್ಯಾದಿ ಬಳಿಯಿದ್ದ
1.5 ಕೋಟಿ ರೂ ಹಣವನ್ನು ದರೋಡೆ ಮಾಡಿಕೊಂಡು ಹೋಗಿ ಎಲ್ಲರೂ ಹೊಸದುರ್ಗದ ಅಜ್ಜಂಪುರ
ರಸ್ತೆಯಲ್ಲಿ ಸೇರಿ ನಂತರ ಕೈನಾಡು ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸದರಿ ಹಣವನ್ನು
ಹಂಚಿಕೊಂಡಿರುವುದಾಗಿ ಮತ್ತು ದರೋಡೆ ಮಾಡಿದ ಹಣದಲ್ಲಿ ಆರೋಪಿ ಶ್ರೀನಿವಾಸನು ಒಂದು ಹೊಸ
ಕಾರನ್ನು ಮತ್ತು ಕಿರಣನು ಹೊಸ ದ್ವಿಚಕ್ರವಾಹನವನ್ನು ಖರೀದಿಸಿರುವುದಾಗಿ ತಿಳಿದು ಬಂದಿರುತ್ತದೆ.
ಮೇಲ್ಕಂಡ ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ರೂ 63,25,000/- ನಗದು ಹಣ,
ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ ರೂ 9,00,000/- ಮೌಲ್ಯದ ಒಂದು ಕಾರು, ರೂ 1,34,286/-
ಬೆಲೆಯ ಒಂದು ಕೆ.ಟಿ.ಎಂ ದ್ವಿಚಕ್ರವಾಹನವನ್ನು ಮತ್ತು ಅರೋಪಿತರು ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ
ಕಾರು 3 ದ್ವಿಚಕ್ರವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರು ಹಾಲಿ ನ್ಯಾಯಾಂಗ
ಬಂಧನದಲ್ಲಿದ್ದು ತನಿಖೆ ಮುಂದುವರೆದಿರುತ್ತದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಚಿತ್ರದುರ್ಗ ಉಪವಿಭಾಗದ ಉಪಾಧೀಕ್ಷಕರಾದ
ಶ್ರೀ.ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ.ಮುದ್ದರಾಜ.ವೈ ಪಿಐ, ರಂಗನಾಥ್
ಕುಮಾರ್, ಇದಾಯತ್‌ವುಲ್ಲಾ.ಜೆ, ಅವಿನಾಶ್, ತಿಮ್ಮರಾಯಪ್ಪ, ರಂಗಸ್ವಾಮಿ, ಲಿಂಗರಾಜು, ಮಾರುತಿ ರಾಮ್,
ತಾರಾನಾಥ್, ಮಂಜುನಾಥ, ಎನ್.ಬಿ, ರಘುನಾಥ.ವಿ, ಎಎಸ್‌ಐ, ಹಾಗೂ ಸಿಬ್ಬಂದಿಗಳಾದ ರಮೇಶ್,
ವೀರಭದ್ರಪ್ಪ, ರಾಜುಮುಡಬಾಗಿಲು, ಗಣೇಶಪ್ಪ, ಮಹಂತೇಶ್, ಸುರೇಶ ಹಂಜಿ ರವರುಗಳ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

Latest News >>

ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...

ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ಶಿಕ್ಷಣದಿಂದ ಸ್ವಾವಲಂಬಿ ಜೀವನ ಸಾಧ್ಯ

ಚಿತ್ರದುರ್ಗ ಜುಲೈ27: ಬದುಕಿನಲ್ಲಿ ಶಿಕ್ಷಣ ಬಹಳ ದೊಡ್ಡ ಪಾತ್ರವಹಿಸಲಿದ್ದು, ಶಿಕ್ಷಣ ಪಡೆಯುವುದರಿಂದ ಸ್ವಾವಲಂಬನೆಯಿAದ ಜೀವನ ಮಾಡುವ...

ಸಂಗೀತ ಹಾಗೂ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಗೀತ ಸಿಂಚನದಂತಹ ಕಾರ್ಯಕ್ರಮಗಳು ಅತ್ಯಗತ್ಯ ವಾಣಿವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ: ಬಿ.ಎಸ್.ರಘುನಾಥ್

ಹಿರಿಯೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳಂತಹ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು, ಸಂಗೀತ ಹಾಗೂ ಕಲೆಗಳನ್ನು...

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page