ಅಡಿಕೆಯ ಬೆಳೆಗಾರ ರೈತರನ್ನು ಮರೆತ ಸರ್ಕಾರ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್

by | 12/12/22 | ಸುದ್ದಿ

ಹಿರಿಯೂರು :
ಮಾರುಕಟ್ಟೆಯಲ್ಲಿ 55 ಸಾವಿರ ಇದ್ದ ಅಡಿಕೆ ಬೆಲೆ 39 ಸಾವಿರಕ್ಕೆ ಇಳಿದಿದೆ. ಅಡಿಕೆ ಬೆಳೆ ತೋಟ ನಿರ್ಮಾಣ, ನೀರಾವರಿ, ಗೊಬ್ಬರ, ಪಂಪ್ ಸೆಟ್, ಕೊಲಿಆಳುಗಳ ವೆಚ್ಚ ದಿನೇ ದಿನೇ ದುಬಾರಿಯಾಗುತ್ತಿದೆ. ಆದರೆ ಅಡಿಕೆ ಬೆಲೆ ಮಾತ್ರ ದಿನೇ ದಿನೇ ಕುಸಿಯುತ್ತಿದ್ದು, ಸರ್ಕಾರ ಅಡಿಕೆ ಬೆಳೆಗಾರರನ್ನು ಮರೆತಿದೆ ಎಂಬುದಾಗಿ ರೈತ ಹೋರಾಟಗಾರರಾದ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಅಡಿಕೆ ಬೆಳೆಗಾರ ರೈತರೊಂದಿಗೆ ಬೆರೆತು ಪರಸ್ಪರ ವಿಚಾರ ವಿನಿಮಯ ನಡೆಸಿ, ಅವರು ಮಾತನಾಡಿದರು.
ಬೋತಾನ್ ನಿಂದ ಹಸಿ ಅಡಿಕೆ ಆಮದು, ರಪ್ತು ನಿರ್ಬಂಧ, ಆಮದಿನ ಮೇಲೆ ಕಡಿಮೆ ಸುಂಕ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ನಮ್ಮ ಗುಣಮಟ್ಟದ ಅಡಿಕೆಯನ್ನು ಕೊಳ್ಳುವವರಿಲ್ಲದೇ ಬೆಳೆಗಾರರ ತ್ರಿಶಂಕು ಸ್ಥಿತಿ ತಲುಪಿದ್ದಾನೆ.ರಾಜ್ಯದಲ್ಲಿ ಅತಿ ಹೆಚ್ಚಿನ ಅಡಿಕೆ ಬೆಳೆಯುತ್ತಿದ್ದು, ಉತ್ಪಾದನೆ ವೆಚ್ಚಕ್ಕೆ ಸರಿಯಾಗಿ ಮಾರುಕಟ್ಟೆ ಬೆಲೆ ಇರಬೇಕೆಂಬ ನಿಯಮವಿದೆ ಆದರೆ ಸರ್ಕಾರ ಆ ನಿಯಮವನ್ನೇ ಮರೆತುಬಿಟ್ಟಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಾದ ರುದ್ರೇಶ್ ಬಾಬು, ಆರ್.ಪ್ರಕಾಶ್, ವೀರಣ್ಣ ಗೌಡ, ಮಂಜುನಾಥ್, ಕೆ.ಎನ್.ಶ್ರೀನಿವಾಸ್, ಕೆಂಚರಾಯ, ವೀರಪ್ಪ, ಶ್ರೀನಾಥ್, ರಂಗಸ್ವಾಮಿ, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಕಸವನಹಳ್ಳಿ ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *