.
ನಾಯಕನಹಟ್ಟಿ ನ.9. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತತೆ ಗೊಂಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಡಿ ಹೋಬಳಿ ಅತಿ ಹೆಚ್ಚು ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆ ಪಟ್ಟಿಕಟ್ಟಿಕೊಂಡಿದ್ದರೂ ಸಹ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಗೆ ಬರುವ ಕುದಾಪುರ ಗ್ರಾಮದಲ್ಲಿ ಪ್ರತಿ ಸರಿ ಮಳೆ ಬಂದರೂ ಸುಮಾರು 10ರಿಂದ 15 ಮನೆಗಳಿಗೆ ನೀರು ನುಗ್ಗುತ್ತವೆ ಎಂದು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮದ ಬಿ.ಓಬಣ್ಣ ಆರೋಪಿಸಿದ್ದಾರೆ.
[raw]
ಅವರು ಗುರುವಾರ ಗ್ರಾಮದ ವಿವಿಧ ಮನೆಗಳಿಗೆ ನೀರು ನುಗ್ಗಿರುವುದನ್ನ ವೀಕ್ಷಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಸುಮಾರು ಹತ್ತರಿಂದ ಹದಿನೈದು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವಂತಹ ದವಸ ಧಾನ್ಯಗಳು ಬಟ್ಟೆ ಅಡಿಗೆ ಬಳಸುವಂತಹ ಅಕ್ಕಿ ರಾಗಿ ಸೇರಿದಂತೆ ನೀರಲ್ಲಿ ನೆಂದು ಹೋಗಿದ್ದ ರಾತ್ರಿ ಎಲ್ಲಾ ನಿದ್ದೆ ಇಲ್ಲದೆ ಮನೆಯಲ್ಲಿರುವ ನೀರನ್ನು ಹೊರಗೆ ಹಾಕುವಂತ ಪರಿಸ್ಥಿತಿ ಬಂದಿದೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ಚರಂಡಿ ವ್ಯವಸ್ಥೆ ಹಾಗೂ ತಡಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಮೌನವಹಿಸಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರಂಡಿ ವ್ಯವಸ್ಥೆ ಕಲ್ಪಿಸಿ ತಡಗೋಡೆಯನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಇದೆ ವೇಳೆ ಗ್ರಾಮಸ್ಥರಾದ ಆರ್ ರಾಜಣ್ಣ ,ಮಾತನಾಡಿ ಕಳೆದ ಮೂರು ವರ್ಷದಿಂದ ಮಳೆಗಾಲದಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಿದ್ದೇವೆ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಮನವಿ ನೀಡಿದ್ದೇವೆ ಆದರು ಸಹ ಪ್ರಯೋಜನವಿಲ್ಲ ನಮ್ಮ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಪರಿಸ್ಥಿತಿ ನೋಡಿ ಹಾಗೆ ಹೋಗುತ್ತಾರೆ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳುವುದು ಚಳ್ಳಕೆರೆಯ ಮಾನ್ಯ ತಹಸಿಲ್ದಾರ್ ಅವರು ಕೂಡಲೇ ನಮಗೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಬಿ ಓಬಣ್ಣ, ಆರ್ ರಾಜಣ್ಣ ಟಿ ಎಸ್ ಪಾಪನಾಯಕ ,ಬಿ ಕುಮಾರ್, ಗೋವಿಂದಪ್ಪ, ಉಮೇಶ್, ನೇತ್ರಾವತಿ, ಗೌರಮ್ಮ, ಗೀತಮ್ಮ, ಬಿ ಹರೀಶ್, ಆರ್ ಮಿಥುನ್, ಡಿ ಬಸವರಾಜ್, ಬೋರಣ್ಣ ಕೆ ಬಿ ಕಲ್ಲೇಶ್, ಬಿ ಬೋರಣ್ಣ, ವಿ. ಗಿರೀಶ್ ಸೇರಿದಂತೆ ಇದ್ದರು . ಮನಮೈನಹಟ್ಟಿ ಗ್ರಾಮಸ್ತರ ಅಕ್ರೊಶ.
ಮನಮೈನಹಟ್ಟಿಯಲ್ಲಿ ಅವೈಜ್ಞಾನಿಕ ಸೇತುವೆಯ ಮೇಲೆ ನೀರು ಹರಿವಿದು ವಿರೋಧಿಸಿ ಗ್ರಾಮಸ್ಥರು ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ.
ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಸೇತುವೆ ನಿರ್ಮಾಣ ಮಾಡಲಾಯಿತು ಸೇತುವೆ ಎತ್ತರದಿಂದ ಮಾಡದೆ ತಗ್ಗು ಪ್ರದೇಶದಲ್ಲಿ ಮಾಡಿರುವ ಸೇತುವೆಯು ನೀರು ಹರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮದ ಊರ ಒಳಗೆ ನೀರು ನಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮ ಪಂಚಾಯಿತಿ ಸದಸ್ಯ ಎಚ್ ಶಿವಣ್ಣ ,ರವರು ಸೇತುವೆ ದುರಸ್ತಿ ಪಡಿಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಬುಧವಾರ ಸಂಜೆ 6 ಗಂಟೆಗೆ ಆರಂಭವಾದ ಮಳೆ ರಾತ್ರಿ 9:00 ವರೆಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿದ ಹಿನ್ನೆಲೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ರವರ ಮನೆ ಸೇರಿದಂತೆ ಸುಮಾರು 10 ಮನೆಗಳಿಗೆ ಮಳೆ ನೀರು ನುಗ್ಗಿದ್ದು ಜನರು ಹೈರಾಣು ಆಗಿದ್ದಾರೆ.
ಇದೇ ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಮಾತನಾಡಿ ನಮ್ಮ ಗ್ರಾಮದಲ್ಲಿ ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿದ್ದು ಕಳೆದ ಮೂರು ವರ್ಷದಿಂದ ಮಳೆ ಬಂದ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗುದು ಸಾಮಾನ್ಯವಾಗಿದೆ. ಮನೆಯಲ್ಲಿದ್ದ ದವಸಧಾನ್ಯ ಸೇರಿದಂತೆ ಸಂಪೂರ್ಣವಾಗಿ ಜಲರುತಗೊಂಡಿವೆ ಎಂದು ಬೇಸರವನ್ನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ,ಎಲ್. ನಾಗರಾಜ್ ನಾಯ್ಕ, ವಿ . ಪ್ರಕಾಶ್, ಠಾಕ್ರ ನಾಯ್ಕ, ಗುರುಸ್ವಾಮಿ, ಕುಮಾರನಾಯ್ಕ, ತಿಪ್ಪೇಸ್ವಾಮಿ, ಪ್ರಜ್ವಲ್ ,ಮಂಜುನಾಥ್,
0 Comments