ಚಳ್ಳಕೆರೆ ನ 9. ಅಕಾಲಿಕ ಮಳೆಯಿಂದ ರೈತರ ಜಮೀನುಗಳು ಜಲಾವೃತ ಬೆಳೆ ನಷ್ಟ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೌದು ಚಳ್ಳಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ ಬೆಳೆ ಕಮರಿಹೋಗಿದ್ದು ಶೇಂಗಾ ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿರುವ ಬೆನ್ನಲ್ಲೇ. ನೀರಾವರಿ ಆಶ್ರಯದಲ್ಲಿ ಈರುಳ್ಳಿ
ಮೆಕ್ಕೆಜೋಳ ಬಿತ್ತನೆ ಮಾಡಿದ ಜಮೀನುಗಳಿಗೆ ನೀರು ನುಗ್ಗಿ ಮಳೆ ನೀರಿಗೆ ಕೊಚ್ಚಿಹೋಗಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿ.

ತಾಲೂಕಿನ ಗಂಜಿಗುಂಟೆ. ಹಿರೆ ಮಧುರೆ.ಚಿಕ್ಕಮಧುರೆ. ಸೋಮಗುದ್ದು. ಗೋಪನಹಳ್ಳಿ. ನಾಯಕನಹಟ್ಟಿ ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ ಈರುಳ್ಳಿ.ಮೆಕ್ಕೆಜೋಳ ಇತರೆ ಬೆಳೆಗಳು ಮೊಳಕೆ ಹೊಡೆಯುವ ಮುನ್ನವೇ ಹಾಳಾಗಿದ್ದು ನಷ್ಟ ಅನುಭವಿಸುವಂತಾಗಿದ್ದು ಸರಕಾರ ಅನ್ನದಾತರ ನೆರವಿಗೆ ಬರುವುದೇ ಕಾದು ನೋಡ ಬೇಕಿದೆ. ಜಿಲ್ಲೆಯ ಮಳೆ ವಿವರ. ಈಶ್ವರಗೆರೆಯಲ್ಲಿ 78.6 ಮಿ.ಮೀ ಮಳೆ
ಬುಧವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಈಶ್ವರಗೆರೆಯಲ್ಲಿ 78.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 8.4 ಮಿ.ಮೀ, ಇಕ್ಕನೂರು 34.2 ಮಿ.ಮೀ, ಬಬ್ಬೂರು 10.6 ಮಿ.ಮೀ, ಸುಗೂರು 38.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 30.6 ಮಿ.ಮೀ, ಚಿತ್ರದುರ್ಗ-2ರಲ್ಲಿ 49.5 ಮಿ.ಮೀ, ಐನಹಳ್ಳಿ 66.4 ಮಿ.ಮೀ, ಭರಮಸಾಗರ 25.2 ಮಿ.ಮೀ, ತುರುವನೂರು 65.4 ಮಿ.ಮೀ, ಸಿರಿಗೆರೆ 38 ಮಿ.ಮೀ, ಹಿರೇಗುಂಟನೂರು 3.1 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರುನಲ್ಲಿ 6 ಮಿ.ಮೀ, ರಾಯಾಪುರ 24 ಮಿ.ಮೀ, ಬಿಜಿಕೆರೆ 37.2 ಮಿ.ಮೀ, ರಾಂಪುರ 2 ಮಿ.ಮೀ, ದೇವಸಮುದ್ರ 3 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 26 ಮಿ.ಮೀ, ಪರಶುರಾಂಪುರ 18.4 ಮಿ.ಮೀ, ನಾಯಕನಹಟ್ಟಿ 44.6 ಮಿ.ಮೀ, ತಳಕು 57.2 ಮಿ.ಮೀ, ಡಿ. ಮರಿಕುಂಟೆ 13.2 ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 19.4 ಮಿ.ಮೀ, ಚಿಕ್ಕಜಾಜೂರು 21.4 ಮಿ.ಮೀ, ಬಿ. ದುರ್ಗ 36 ಮಿ.ಮೀ, ತಾಳ್ಯ 8.2 ಮಿ.ಮೀ, ರಾಮಗಿರಿ 7 ಮಿ.ಮೀ, ಹೆಚ್‍ಡಿ ಪುರ 27.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 17.4 ಮಿ.ಮೀ, ಬಾಗೂರು 30.1 ಮಿ.ಮೀ, ಮತ್ತೋಡು 15.2 ಮಿ.ಮೀ, ಶ್ರೀರಾಂಪುರ 50.2 ಮಿ.ಮೀ, ಮಾಡದಕೆರೆ 48.2 ಮಿ.ಮೀ ಮಳೆಯಾಗಿದೆ.
31 ಮನೆಗಳು ಭಾಗಶಃ ಹಾನಿ: ಬುಧವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು 31 ಮನೆಗಳು ಭಾಗಶಃ ಹಾನಿಯಾಗಿದ್ದು, 1 ದೊಡ್ಡ ಜಾನುವಾರು ಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 3 ಮನೆ ಭಾಗಶಃ ಹಾನಿ ಹಾಗೂ 1 ದೊಡ್ಡ ಜಾನುವಾರು ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 10 ಮನೆ ಭಾಗಶಃ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 5 ಮನೆ ಭಾಗಶಃ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
0 Comments